Radha Iyer

Click here to edit subtitle

Blog

6.

Posted by [email protected] on November 25, 2012 at 9:45 AM Comments comments (0)

ನಾ ಕವಿಯಲ್ಲ...

 

ರವಿ ಕಾಣದ್ದನ್ನ

ಕವಿಕಂಡನೆಂದ

ಒಬ್ಬ ಕನಸುಗಾರ

ಕಲ್ಪನೆಯ ಆಗಸದಿ

ಬಾನಾಡಿಯ ಬೆನ್ನೇರಿದ

ಆ ಸೊಗಸುಗಾರ

 

ಕಣ್ಬಿಟ್ಟೆ, ಇದ್ದೆ ನಾ

ಭೂಮಿಯ ಮೇಲೆ..

ಎದ್ದು, ಸದ್ದಡಗಿಸಿ

ಮುಂಜಾನೆಯ ಕನಸು

ಸುಮ್ಮನೆ ಕಣ್ಹಾಯ್ಸಿದೆ

ನಿನ್ನೆ ಇರುಳಿನಲಿ ತೆರೆದಿಟ್ಟ

ಪುಟವೊಂದರ ಸಾಲಿನೆಡೆಗೆ...

 

 

 

 

6.

Posted by [email protected] on November 13, 2012 at 11:30 PM Comments comments (0)

ಭಾವನೆಯ ಕುಂಚಕೆ

ಬರವಣಿಗೆ ಬೇಕೆ

ಕಲ್ಪನೆಯ ಕಣ್ಣಿನ

ನೋಟವೇ ಸಾಕೆ!?

5.

Posted by [email protected] on November 13, 2012 at 11:30 PM Comments comments (0)

ಅಭಿವ್ಯಕ್ತಿಯ

ಮುಖಪುಟವಂತೆ ಕಣ್ಣು

ಅದರ ಕನ್ನಡಿಯಂತೆ

ಭಾವಪ್ರಣತಿ ಹೆಣ್ಣು!

3.

Posted by [email protected] on November 13, 2012 at 11:25 PM Comments comments (0)

ಬೇಕಿದೆ ಉತ್ತರ

ನಾನಾರೆಂಬ ಅಸ್ಮಿತೆಯ

ಹುಡುಕಾಟಕೆ

ಒಂದು ಮೂರ್ತಾಕಾರ...

 

2.

Posted by [email protected] on November 13, 2012 at 11:20 PM Comments comments (0)

ಮುಖಪುಟದ ಕಿಟಕಿಯಲಿ

ಬದುಕಿನ ಮುನ್ನುಡಿ

ಪ್ರತಿ ಬರಹ ಪ್ರತಿಫಲಿಸಿಹೆ

ಭಾವನೆಯ ಕನ್ನಡಿ

1.

Posted by [email protected] on November 13, 2012 at 11:20 PM Comments comments (0)

ಒಂದು ಪ್ರಶ್ನೆ?

 

ನಿನ್ನೆ ಬೀದಿಯ ಲೈಟು

ಜೋರಾಗಿ ಉರಿದು ‘ಫಳ್’ ಎಂದು

ಒಡೆದು ಹೋಯಿತು..

ರಸ್ತೆಯೆಲ್ಲ ಬರೀ ಕಪ್ಪು..ಕಪ್ಪು..

ಕರೆಂಟು ಒಮ್ಮೆಲೆ ಜಾಸ್ತಿ ಹರಿದಿತ್ತು ಪಾಪ!!

ಒಂದು ಪ್ರಶ್ನೆ,

ಭಾವನೆಗಳು ಹೀಗೆಯೆ

ಒಮ್ಮೆಲೆ ದಾಳಿ ಮಾಡಿದರೆ,

ಹೃದಯವು ಒಡೆಯುವುದೆ?

ತಾಳದೆ ಮನಸಿನ ಪ್ರತಾಪ!!