Radha Iyer

Click here to edit subtitle

Blog

view:  full / summary

15

Posted by [email protected] on March 29, 2014 at 6:30 AM Comments comments (45)

 

ಅಮ್ಮ

 

 ಅಮ್ಮ

ನಿನ್ನಂತರಂಗ

ತೀರಸಾಗರ...

ಅಲೆಯಾಗಿ

ಅಪ್ಪುವೆ ನಾ

ನಿನ್ನ ಮಡಿಲ...

 

ಭಾವನೆಯ

ಆಗಸದಲ್ಲಿ

ನೀ ಧ್ರುವತಾರೆ ಕಣೆ..

ನಿನ್ನೊಲುಮೆ

ಪ್ರೀತಿ ಆಟದಲಿ

ನಾ ಸೋತರೆ, ನೀನೆ ಹೊಣೆ...

ತಂಪೆರೆವ

ಆ ಮುಗುಳ್ನಗೆಯ

ಪಸರಿಸು ಈ ಧರೆಗೆ...

ಉರಿಬಿಸಿಲ

ಅವಳ ಬೇಗೆಯನು

ಮರೆಸು ನೀ ಒಮ್ಮೆಗೆ...


ನಿನ್ನ ಜೋಲಿ

ಲಾಲಿಯಲ್ಲಿ

ಕನಸೊಂದು ಮೂಡಿದೆ...

ಹದಿನಾಲ್ಕು

ಲೋಕದಲಿ
ನಿನ್ನ ಹೆಸರೆ ಕೇಳಿದೆ...

ಪಿಸುಗುಡಲೇ

ಗುಟ್ಟಿನ ಮಾತು

ನಿನ್ನೆದೆಗೂಡಿನಲಿ...

ಪ್ರತಿಜನ್ಮ

ನಿನ್ನ ಕುಡಿ ನಾನೆ

ಬರೆದುಕೊ ನೀ ಮನಸಿನಲಿ...

 

5.

Posted by [email protected] on March 14, 2014 at 12:50 AM Comments comments (0)

 

ಪ್ರೀತಿ ಹಸಿರಾಗುವೆ


ಒಂದೇ ಒಂದು ಬಾರಿ

ನುಡಿಯೆ ಆ ಪ್ರೀತಿ ಪಲ್ಲವಿಯ

ಒಂದೇ ಒಂದು ಬಾರಿ

ಬರೆಯೆ ಆ ಪ್ರೀತಿ ಕವಿತೆಯಾ...

ನಾ ಪ್ರೇಮ ಪದವಾಗುವೆ

ನಿನ್ನ ಕವನದುಸಿರಾಗುವೆ

ಆ ಕನಸನೆಲ್ಲ ಕದಿವೆ

ನಿನ್ನ ಮನಸ ಮಾತಾಗುವೆ

ಪ್ರೀತಿ ಹಸಿರಾಗುವೆ

 

 

ನೀನಿರದೆ ಹೇಗಿರಲಿ?

ಎಂದು ಕೇಳಿದೆ ಪ್ರಾಣ

ನಿನ್ನ ಹೆಜ್ಜೆ ಸವಿಯುವುದೆ

ಪಾದ ಹೇಳಿದೆ ಪಯಣ

ನಿನ್ನ ಮರೆತು ಹೋದ ಆ ಕ್ಷಣ

ಜಗವೆಲ್ಲ ಶೂನ್ಯವೆ

ನಿನ್ನ ಕಲೆತು ಹೋದ ಈ ದಿನ

ತೊರೆಯಲು ಸಾಧ್ಯವೆ?

ನನ್ನ ಹೃದಯ ಬಡಿತಗಳಲಿ

ನಿನ್ನ ಹೆಸರನೊಮ್ಮೆ ಕರೆವೆ

ಆ ಕರೆಯ ಮಿಡಿತಗಳಲಿ

ನಿನ್ನ ಉಸಿರನೊಮ್ಮೆ ಬೆರೆವೆ

ಪ್ರೀತಿ ಸ್ವರವಾಗುವೆ

 

 

ಚಂದಿರನ ಎದೆಯೊಳಗೆ

ಮನೆಯ ಮಾಡೋಣ ಒಂದು

ಯಾರಿರದ ಲೋಕದಲಿ

ಸೇರಿ ಬಾಳೋಣ ಇಂದು

ನೀನಿರಲು ನನ್ನ ಹತ್ತಿರ

ನೆನಪುಗಳೆ ಬೇಡವೆ

ಕಣ್ ರೆಪ್ಪೆಯೊಳಗೆ ಬಚ್ಚಿಟ್ಟು

ನಿನ್ನ ಕೊನೆವರೆಗು ಕಾಯುವೆ

ನನ್ನ ರೋಮ ರೋಮಗಳಲಿ

ನಿನ್ನ ರೇಖೆ ನಾ ಬಿಡಿಸುವೆ

ನನ್ನ ಕನಸ ಬಣ್ಣ ತುಂಬಿ

ನಿನ್ನ ರೂಪ ಸಿಂಗರಿಸುವೆ

ಪ್ರೀತಿ ರಂಗಾಗುವೆ

 

4. (Tune: Dil Ko Tumse Pyar Hua)

Posted by [email protected] on August 4, 2013 at 5:20 AM Comments comments (0)

 

ಒಲವೇ ಮೊದಲ ಬಾರಿಗೆ

ನಿನ್ನಯ ಹೆಸರಿಗೆ

ಹೃದಯವ ಬರೆದೆನೆ...

ನಿನ್ನಾ ಮನಸಿನ ಊರಿಗೆ

ತೆರಳುವ ಬಯಕೆಗೆ

ಕಾತರ ತಾಳೆನೆ...

ಕನಸಿನ... ಮನ್ಮಥನೆ...

ಸಾಕಿನ್ನು ಕಾಡುವ ಚಿಂತನೆ...

ಕಣ್ಮುಂದೆ... ಬಾ ಒಮ್ಮೆ...

ನಿನ್ನಲ್ಲೆ ಕಳೆದೋಗುವ ಮುನ್ನವೆ...

 

 

ಬರೆಯಲು ಹೊಸ ಸಂಚಯ

ಶುರುವಿಟ್ಟಿದೆ ತೊದಲ ಪರಿಚಯ

ಹೆಣೆಯಲು ನಿನ್ನ ಅಭಿನಯ

ಕಳೆಕಟ್ಟಿದೆ ಮೊದಲ ವಿನಿಮಯ

ನಿಂತಲ್ಲೆ ನನಗೀಗ

ನಿನ್ನದೇ ಸವಿಧ್ಯಾನ

ಸಂಜೆಯು ಸುಡುತಿದೆ

ತೇಲಿ ನಿನ್ನಯ ಮೌನ

ಭಾರವಾಯಿತೇಕೋ ಕಾಣೆ ನಾನು ರಾತ್ರಿ ಇರುಳು

ಪ್ರತಿ ಕನಸಲೂ ಇಣುಕಿದೆ ನಿನ್ನ ನೆರಳು

ಹೃದಯ ಬಾಗಿಲ

ತೆರೆವ ಮುನ್ನವೆ

ನೆನಪಾಗು ನೀ...

 

ಸವಿಯಲು ನಿನ್ನ ಪ್ರೀತಿಯ

ಮುಡುಪಿಟ್ಟಿಹೆ ನನ್ನ ನಾಳೆಯ

ತೆರೆಯಲು ಮನದ ಹಾಳೆಯ

ಕಂಡೆ ನೀ ಬರೆದ ಓಲೆಯ

ಪದವಿರದ ಸ್ವರವಿರದ

ಮೌನ ಸಂಗೀತ ನೀನು

ನನ್ನೊಳಗೆ ಮಿಡಿಯುತಿರೊ

ಹೃದಯ ಸರಿಗಮದ ವೇಣು

ಚಂದಿರನ ಕಾಂತಿಯಲ್ಲಿರೊ ಮಿಂಚು ನೀನು

ಆ ಪ್ರೀತಿ ಬೆಳದಿಂಗಳ ಸುರಿಸು ಇನ್ನು

ನಿನ್ನ ಸವಿನಯ

ಕಣ್ಣ ಅಂಚಲಿ

ಮರೆಯಾಗುವೆ...

 

 


6.

Posted by [email protected] on November 25, 2012 at 9:45 AM Comments comments (0)

ನಾ ಕವಿಯಲ್ಲ...

 

ರವಿ ಕಾಣದ್ದನ್ನ

ಕವಿಕಂಡನೆಂದ

ಒಬ್ಬ ಕನಸುಗಾರ

ಕಲ್ಪನೆಯ ಆಗಸದಿ

ಬಾನಾಡಿಯ ಬೆನ್ನೇರಿದ

ಆ ಸೊಗಸುಗಾರ

 

ಕಣ್ಬಿಟ್ಟೆ, ಇದ್ದೆ ನಾ

ಭೂಮಿಯ ಮೇಲೆ..

ಎದ್ದು, ಸದ್ದಡಗಿಸಿ

ಮುಂಜಾನೆಯ ಕನಸು

ಸುಮ್ಮನೆ ಕಣ್ಹಾಯ್ಸಿದೆ

ನಿನ್ನೆ ಇರುಳಿನಲಿ ತೆರೆದಿಟ್ಟ

ಪುಟವೊಂದರ ಸಾಲಿನೆಡೆಗೆ...

 

 

 

 

14.

Posted by [email protected] on November 13, 2012 at 11:40 PM Comments comments (0)

ದೀಪಾವಳಿಯಲಿ ನನ್ನೊಂದು ಮನವಿ..

ಬೆಳಗು ಎನ್ನೊಳಗೆ

ಆರದ ಆತ್ಮ ಜ್ಯೋತಿಯನು

ಪ್ರಜ್ವಲಿಸಿ, ಉಜ್ವಲಿಸುವ

ಜ್ಞಾನ ಪ್ರಣತಿಯನು

ಇಂದು. ಮುಂದು.. ಎಂದೆಂದೂ!!

 

ಭೇಧಿಸಬೇಕಿದೆ ನೀ ನನ್ನೊಳಗಿನ

ಅಂಧಕಾರವನು

ಕಾಣದೆ ಅಡಗಿರುವ

ಅಹಂಕಾರವನು

ಇಂದು. ಮುಂದು.. ಎಂದೆಂದೂ!!

 

ಬರಿಯ ದೀಪವಲ್ಲ

ನೀ ನನ್ನ ಪಾಲಿಗೆ

ಮನಸ ಪ್ರತಿಫಲಿಸುವ

ಕನ್ನಡಿಯು ಈ ಬಾಳಿಗೆ

ಇಂದು. ಮುಂದು.. ಎಂದೆಂದೂ!!

 

 

 

 

13.

Posted by [email protected] on November 13, 2012 at 11:40 PM Comments comments (0)

ಭಾವ ನಿವೇದನೆ!

ಹೇಳಬೇಕೆನಿಸಿದೆ

ನೂರಾರು ಮಾತು,

ಮಾತು ನೀಡಿ

ಕೈಹಿಡಿದವಳ ಕುರಿತು..

 

ಉಸಿರ ಏರಿಳಿತಕೆ

ಭಾವವೀಣೆ ಅವಳು,

ಕಂಡ ಕನಸಿಗೆ

ಬಣ್ಣ ತುಂಬಿದವಳು..

 

ಕಂಟದಿ ಕುಣಿವ

ನಾಟ್ಯ ಶಾಂತಲೆ ಅವಳು,

ರೋಮದಿ ಬರೆವ

ಕಲಾ ಸರಸ್ವತಿ ಅವಳು..

 

ಸೋತಾಗ ಬೆನ್ತಟ್ಟಿ

ಹುರಿದುಂಬಿಸಿದಳವಳು,

ಗೆಲುವಿನಲಿ ನನ್ನೊಡನೆ

ಸಂಭ್ರಮಿಸಿದಳವಳು..

 

ಮನಸಿನ ಭಾವನೆಗೆ

ಸೇತುವೆಯು ಅವಳು,

ಅಭಿಮಾನದ ಹಕ್ಕಿಗೆ

ರೆಕ್ಕೆ ನೀಡಿದವಳು

 

ಅವಳಿಲ್ಲದೆ ನಾನಿಲ್ಲ

ಈ ಅಸ್ತಿತ್ವಕೆ ಬೆಲೆಯಿಲ್ಲ,

ಓ! ‘ಕನ್ನಡ ಮಾತೆ’ಯೆ ಕೇಳೆ

ನಿನಗರ್ಪಿಸಿಹೆ ನನ್ನೆಲ್ಲ ನಾಳೆ...

 

 


 

 

 

 

6.

Posted by [email protected] on November 13, 2012 at 11:30 PM Comments comments (0)

ಭಾವನೆಯ ಕುಂಚಕೆ

ಬರವಣಿಗೆ ಬೇಕೆ

ಕಲ್ಪನೆಯ ಕಣ್ಣಿನ

ನೋಟವೇ ಸಾಕೆ!?

5.

Posted by [email protected] on November 13, 2012 at 11:30 PM Comments comments (0)

ಅಭಿವ್ಯಕ್ತಿಯ

ಮುಖಪುಟವಂತೆ ಕಣ್ಣು

ಅದರ ಕನ್ನಡಿಯಂತೆ

ಭಾವಪ್ರಣತಿ ಹೆಣ್ಣು!

4.

Posted by [email protected] on November 13, 2012 at 11:25 PM Comments comments (0)

ಮಾತು-ಮೌನಗಳ ನಡುವೆ

ಭಾವತೀರದ ಯಾನ

ಕನಸ ಅಲೆಗಳ ಮೇಲೆ

ಬಣ್ಣದೋಕುಳಿಯ ಕವನ!

3.

Posted by [email protected] on November 13, 2012 at 11:25 PM Comments comments (0)

ಬೇಕಿದೆ ಉತ್ತರ

ನಾನಾರೆಂಬ ಅಸ್ಮಿತೆಯ

ಹುಡುಕಾಟಕೆ

ಒಂದು ಮೂರ್ತಾಕಾರ...

 


Rss_feed